ಅಚ್ಚಿನ ಹಲಗೆ

 ಅಚ್ಚು ಮೊಳೆ ಜೋಡಣೆಯಿಂದ ಮುದ್ರಣ (ಲೆಟರ್ ಪ್ರೆಸ್ ಪ್ರಿಂಟಿಂಗ್) ಮಾಡುವಾಗ ಅನೇಕ ವೇಳೆ, ಅದರಲ್ಲೂ ವರ್ತಮಾನ ಪತ್ರಿಕೆ ಮುದ್ರಣ ಮಾಡುವಾಗ ಅಚ್ಚು ಮೊಳೆಗಳ ಫಲಕದಿಂದ (ಟೈಪ್ ಫಾರಂ) ಸ್ಟೀರಿಯೋ ಟೈಪ್ ಎಂಬ ಸೀಸದ ಪ್ರತಿಫಲಕವನ್ನು ತಯಾರು ಮಾಡಬೇಕಾಗುತ್ತದೆ. ಇದೇ ಅಚ್ಚಿನ ಹಲಗೆ ಅಥವಾ ಮುದ್ರಣದ ತಗಡು. ಆಗ ಪೇಪಿಯರ್ ಮ್ಯಾಷೆ ಎಂಬ ದಪ್ಪ ಮತ್ತು ಮೃದುವಾಗಿರುವ ರುಬ್ಬಿದ ಕಾಗದವನ್ನು ಅಚ್ಚುಮೊಳೆಗಳ ಫಲಕದ ಮೇಲಿಟ್ಟು ಜೋರಾಗಿ ಒತ್ತಿದರೆ ಮುದ್ರಣವಾಗಬೇಕಾದ್ದೆಲ್ಲ ಈ ಕಾಗದದಲ್ಲಿ ಮೂಡುತ್ತದೆ. ಇದನ್ನು ಒಂದು ಎರಕ ಹೊಯ್ಯುವ ಯಂತ್ರೋಪಕರಣದಲ್ಲಿಟ್ಟು (ಕ್ಯಾಸ್ಟಿಂಗ್ ಬಾಕ್ಸ್) ಅದರ ಮೇಲೆ ಕರಗಿಸಿದ ಸೀಸವನ್ನು ಎರಕ ಹೊಯ್ದರೆ ತೆಳುವಾದ ಸೀಸದ ಮುದ್ರಣ ಫಲಕ ದೊರೆಯುತ್ತದೆ.

 

(ಬಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ